ಹನಬಾಳು ಹಾಸನ ಜಿಲ್ಲೆಯ ಸಕಲೇಶಪುರದ ಬಳಿ ಇರುವ
ಒಂದು ಪುಟ್ಟ ಗ್ರಾಮ. ಹಾಸನ ಜಿಲ್ಲೆಯಲ್ಲಿ ಹೊಯ್ಸಳ ನಿರ್ಮಿತ ಅನೇಕ ದೇವಾಲಯಗಳಿವೆ. ಈ ಕಾಲಭೈರವನ
ಮಂದಿರವಿರುವುದು ಒಂದು ಬೆಟ್ಟದ ಮೇಲೆ. ಅಲ್ಲಿಗೆ ತಲುಪಿ ದೇಗುಲದ ಒಳಹೊಕ್ಕರೆ ವಾತಾನುಕೂಲ ವ್ಯವಸ್ಥೆಯಿರುವ ಕಟ್ಟಡದಲ್ಲಿದ್ದಂತೆ ಭಾಸವಾಗುತ್ತದೆ. ಈ
ದೇಗುಲದ ಸುತ್ತ ಬೆಟ್ಟಗಳೇ ವ್ಯಾಪಿಸಿವೆ. ದೇವಾಲಯದ ಸುತ್ತ ಪ್ರದಕ್ಷಿಣೆ ಬರಲು ಅನುಕೂಲವಾಗುವಂತೆ
ಅಗಲವಾದ ಜಗುಲಿಯಿದೆ. ಸಂಪೂರ್ಣ ಶಿಲಾರಚನೆಯಾಗಿರುವ ಈ ಮಂದಿರದ ಗೋಪುರ ಮತ್ತು ಕಲಶಗಳು ಕೂಡ
ಕಲ್ಲಿನವೇ. ಮಳೆಯ ನೀರು ಸರಾಗವಾಗಿ ಹರಿದು ಹೋಗುವಂತೆ ರಚಿಸಲಾದ ಮಳೆನೀರು ದೋಣಿಯನ್ನು
ಚಿತ್ರದಲ್ಲಿ ಕಾಣಬಹುದು. ಗೋಪುರದ ಮುಂದೆ ಚಾಚಿರುವ ಶುಕನಾಸಿ ಅಷ್ಟೇನೂ
ಕಲಾತ್ಮಕವಾಗಿಲ್ಲದಿದ್ದರೂ, ಸ್ಥಳದಲ್ಲೇ ದೊರೆತ ಕಲ್ಲುಗಳಿಂದ ಹೆಚ್ಚಿನ ಅಲಂಕಾರಗಳಿಲ್ಲದೇ
ನಿರ್ಮಿಸಲಾಗಿದೆ.
ಈಗ ಈ ದೇಗುಲದಲ್ಲಿ ಪೂಜೆ
ನಡೆಯುತ್ತಿಲ್ಲವಾದರೂ, ಒಂದು ಕಾಲದಲ್ಲಿ ಪ್ರಸಿದ್ಧ ಮಂದಿರವಾಗಿದ್ದಿರಬಹುದು. ಮುಂದೆ ಕಾಣುವ
ಮುಖಮಂಟಪವು ನಂತರದ ರಚನೆಯೆಂದು ತೋರುತ್ತದೆ. ಏಕೆಂದರೆ ಅಲ್ಲಿ ಕಿಟಕಿಯನ್ನು ಅಳವಡಿಸಲಾಗಿದೆ.
ಚಿತ್ರ -ಮಾಹಿತಿ : ಅಂತರ್ಜಾಲ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ