ಒಂದು ಮನವಿ
ಆರಾಧಕರು ಶಿವನನ್ನು ಹಲವು ರೂಪಗಳಲ್ಲಿ ಆರಾಧಿಸುವ ಪದ್ಧತಿಯಿದೆಯಷ್ಟೆ. ಅವುಗಳಲ್ಲಿ ಶ್ರೀ ಕಾಲಭೈರವನೆಂಬ ಶಿವರೂಪವು ಅನೇಕ ದೃಷ್ಠಿಗಳಿಂದ ಆಸಕ್ತಿದಾಯಕವಾಗಿದೆ. ಶಿವನ ಈ ಸ್ವರೂಪದ ಆರಾಧಕರು ಭಾರತದಾದ್ಯಂತ ಹರಡಿರುವರು. ಮುಖ್ಯವಾಗಿ ಕಾಶೀ ಕ್ಷೇತ್ರವು ಕಾಲಭೈರವನ ಮೂಲ ನೆಲೆಯೆಂಬ ಪೌರಾಣಿಕ ಐತಿಹ್ಯಗಳೂ ಇವೆ. ಉತ್ತರಭಾರತ ದಕ್ಷಿಣ ಭಾರತಗಳಲ್ಲಿ ಕಾಲಭೈರವನ ಪೂಜಾವಿಧಾನಗಳಲ್ಲಿ ವೈವಿಧ್ಯ ತೋರಿಬಂದರೂ, ಈ ದೇವತೆಯ ಸ್ತುತಿಗೆಂದು ರಚಿತವಾಗಿರುವ ಸಾಹಿತ್ಯದಲ್ಲಿ ಏಕತೆಯು ಕಂಡುಬರುತ್ತದೆ.
ಪ್ರಸ್ತುತ ದಕ್ಷಿಣ ಭಾರತ ಅದರಲ್ಲೂ ಕರ್ನಾಟಕದಲ್ಲಿ ನೆಲೆಗೊಂಡಿರುವ ಶ್ರೀ ಕಾಲಭೈರವನ ಭಕ್ತರು ರಾಜ್ಯದ ವಿವಿದೆಡೆಗಳಲ್ಲಿ ವಾಸಿಸುತ್ತಿದ್ದು, ವಿವಿಧ ಪೂಜಾ ವಿಧಾನಗಳನ್ನು ಅನುಸರಿಸುತ್ತಿರುವರು. ಸಾಧಾರಣವಾಗಿ ಒಂದು ನಿರ್ದಿಷ್ಟ ದೇವತೆಯ ಆರಾಧನೆಯನ್ನು ಆ ದೇವತೆಯ ಒಕ್ಕಲು ಎಂದು ಕರೆಯುವುದು ರೂಢಿ. ಹೀಗೆ ಕಾಲಭೈರವನ ಒಕ್ಕಲೆಂದು ಆತನನ್ನು ಪೂಜಿಸುತ್ತಿರುವವರಲ್ಲಿ, ಅನೇಕರಿಗೆ ತಮ್ಮ ಕುಲದೇವತೆಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಅರಿಯುವ ಆಸಕ್ತಿ ಇರಬಹುದು. ಶ್ರೀ ಕಾಲಾಭೈರವನ ಬಗ್ಗೆ ಇರಬಹುದಾದ ಸಾಹಿತ್ಯ, ಪೂಜಾ ವಿಧಾನಗಳು ಮುಂತಾಗಿ ಹಲವು ಆರಾಧನಾ ವಿಧಾನಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು, ಈ ದೇವತೆಯ ಆರಾಧನೆಯನ್ನು ಇನ್ನಷ್ಟು ಅರ್ಥಪೂರ್ಣವಾಗಿಸಬಹುದು.
ಈ ಉದ್ದೇಶಕ್ಕೆಂದು ಎಲ್ಲರೂ ಒಂದೆಡೆ ಸೇರುವುದು ಆಗದ ಮಾತು. ಆದರೆ ಅಂತರ್ಜಾಲದ ವೇದಿಕೆ ಇದಕ್ಕೆ ನೆರವಾಗಬಲ್ಲದು. ಶೀ ಕಾಲಭೈರವ ಅರಾಧನೆ, ಪೂಜಾ ವಿಧಾನಗಳನ್ನು, ಜಾತ್ರೆ, ಉತ್ಸವ ಮುಂತಾದ್ದನ್ನು ಶ್ರದ್ಧೆಯಿಂದ ಮಾಡುತ್ತಿರುವವರಲ್ಲಿ ಮನೆಯ ಹಿರಿಯರ ಪಾಲು ಅಧಿಕ. ಅವರು ತಾವು ಅನುಸರಿಸುತ್ತಿರುವ ಪೂಜ ಕೈಂಕರ್ಯಗಳು ಮುಂದುವರೆಯಬೇಕೆಂಬ ಹಂಬಲವುಳ್ಳವರು ಮುಂದಿನ ತಲೆಮಾರಿಗೆ ಕುಲದೇವತೆಯ ಕುರಿತಾದ ತಮ್ಮ ಅಭಿಮಾನವನ್ನು ವರ್ಗಾವಣೆ ಮಾಡಬೇಕೆಂದರೆ, ಮಕ್ಕಳೀಗ ತಮ್ಮ ಊರಿನಲ್ಲಿ, ಆಷ್ಟೇಕೆ ದೇಶದಲ್ಲೇ ಇರುವುದಿಲ್ಲ. ಅವರೊಂದಿಗೆ ಸಂವಹನಕ್ಕೆಂದು ವಿದ್ಯುನ್ಮಾನ ಮಾಧ್ಯಮಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆಯೀಗ ಬರುತ್ತಿದೆ. ಅದೇ ವೇಳೆಗೆ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಹಿರಿಯರಿಗೆ ಅವರದ್ದೇ ಆದ ತೊಂದರೆಗಳಿವೆ. ಆದರೆ ಮಕ್ಕಳಿಗೆ ಆಂಥ ತೊಂದರೆಯಿಲ್ಲ. ಇಂದು ಅಂತರ್ಜಾಲವೆನ್ನುವುದು ಅವರಿಗೆ ಸರ್ವೆಸಾಮಾನ್ಯ ಸಂಗತಿಯಾಗಿದೆ. ಕುಲದೇವತೆ ಶ್ರೀಕಾಲಭೈರವನ ಬಗ್ಗೆ ತಿಳಿಯಲು/ತಿಳಿಸಲು ಅಂತರ್ಜಾಲವನ್ನು ಬಳಸಬಹುದಾಗಿದೆ.
ಶ್ರೀಕಾಲಭೈರವನ ಯುವ ಆರಾಧಕರು ಮಾಡಬಹುದಾದ ಕಾರ್ಯವೆಂದರೆ :
೧) ತಮ್ಮ ಸಂಪರ್ಕಕ್ಕೆ ಬರುವ ಈ ಒಕ್ಕಲಿನ ಜನರ ಅಂತರ್ಜಾಲ ವಿಳಾಸವನ್ನು ಸಂಗ್ರಹಿಸುವುದು ಮತ್ತು ಇದನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದು.
೨) ತಮ್ಮ ಹಿರಿಯರು ಆರಾಧಿಸುತ್ತಿರುವ ಪೂಜಾ ವಿಧಾನಗಳು, ಚಿತ್ರಗಳನ್ನು ಸಂಗ್ರಹಿಸುವುದು.
೩) ಪೂಜಾ ದೃಶ್ಯಗಳು, ಹಾಡುಗಳು ಮುಂತಾದ ಧಾರ್ಮಿಕ ಸಮಾರಂಭಗಳ ಚಿತ್ರಗಳನ್ನು ಯು-ಟ್ಯೂಬ್ ನಲ್ಲಿ ಅಪ್ ಲೋಡ್ ಮಾಡುವುದು.
೪) ನಮ್ಮ ಅನೇಕ ದೇಗುಲಗಳಲ್ಲಿ ಕಾಣಸಿಗುವ, ತನ್ನ ವಿಶಿಷ್ಟರೂಪದಿಂದ ಗಮನಸೆಳೆಯುವ ಶ್ರೀಕಾಲಭೈರವ ವಿಗ್ರಹಗಳ ಚಿತ್ರಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸುವುದು.
೫) ಶ್ರೀಕಾಲಭೈರವ ದೇವಕಾರ್ಯ, ಶ್ರೀ ಕಾಲಭೈರವ ಅಷ್ಟಮಿ ಮುಂತಾದ ಆಚರಣೆಯಲ್ಲಿ ಅನುಸರಿಸುವ ವಿಶಿಷ್ಟ ಪೂಜಾಕ್ರಮಗಳಿದ್ದರೆ ಅವುಗಳ ವಿನಿಮಯ.
ಇಂಥ ಉದ್ದೇಶಗಳಿಗಳಿಗೆ ಈ ಬ್ಲಾಗ್ ಮುಕ್ತವಾಗಿದೆ. ಆಸಕ್ತರು ಶ್ರೀಕಾಲಭೈರವನಿಗೆ ಸಂಬಂಧಿಸಿದ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುವ ಆಶಯದಿಂದ ರಚಿತವಾದ ಈ ಬ್ಲಾಗ್ ಗೆ ಕಾಲಭೈರವ ಒಕ್ಕಲಿನ ಮಂದಿ ಸಹಕಾರ ನೀಡಲೆಂದು ಮನವಿ.
ಶ್ರೀಕಾಲಭೈರವನ ಕುರಿತಾಗಿ ನನ್ನ ಆಸಕ್ತಿಗಳನ್ನು ಕೆರಳಿಸಲು ಕಾರಣವಾದ ಹಲವು ಸಂಗತಿಗಳನ್ನು ಪ್ರತಿ ತಿಂಗಳಿನ ಸಂಚಿಕೆಗಳಲ್ಲಿ ಪ್ರಕಟಿಸುವೆ.

* * * * * * * * *